ಆಲ್ಬರ್ಟ್ ಕಾಮೂ(: [albɛʁ ] ( ); ೭ ನವೆಂಬರ್ ೧೯೧೩ – ೪ ಜನವರಿ ೧೯೬೦)ಫ್ರಾನ್ಸ್ ದೇಶದ ಲೇಖಕ,ಪತ್ರಕರ್ತ ಮತ್ತು ತತ್ವಜ್ಞಾನಿ. ಇವರಿಗೆ ೧೯೫೭ರ ಸಾಲಿನ ಸಾಹಿತ್ಯದ ನೋಬೆಲ್ ಪ್ರಶಸ್ತಿ ದೊರೆತಿದೆ.. ಇವರ ದೃಷ್ಟಿಕೋನವು ತತ್ವಶಾಸ್ತ್ರದಲ್ಲಿ ಅಸಂಗತತೆಯ ಪರಿಕಲ್ಪನೆಯು ಬೆಳೆಯುವಲ್ಲಿ ಸಹಾಯ ಮಾಡಿತು.ವ್ಯಕ್ತಿಗತ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವುದರೊಂದಿಗೆ ನಿರಾಕರಣವಾದವನ್ನು ತನ್ನ ಜೀವಮಾನ ಪೂರ್ತಿ ವಿರೋಧಿಸಿಕೊಂಡು ಬಂದುದಾಗಿ ತನ್ನ ಪುಸ್ತಕ ದಿ ರೆಬೆಲ್ ನಲ್ಲಿ ಬರೆದುಕೊಂಡಿದ್ದಾರೆ. ಕಾಮೂ ತನ್ನ ಜೀವಿತಕಾಲದಲ್ಲೇ ಅಸ್ತಿತ್ವವಾದಿ ಎಂದು ಕರೆಸಿಕೊಂಡಿದ್ದರೂ ಅವರು ಅದನ್ನು ಬಲವಾಗಿ ನಿರಾಕರಿಸುತ್ತಿದ್ದರು .೧೯೪೫ರ ಒಂದು ಸಂದರ್ಶನದಲ್ಲಿ "ಇಲ್ಲ, ನಾನು ಅಸ್ತಿತ್ವವಾದಿಯಲ್ಲ.ಸಾರ್ತ್ರೆ ಮತ್ತು ನಾನು ಯಾವಾಗಲೂ ಅಸ್ತಿತ್ವವಾದಿಗಳ ಪಟ್ಟಿಯಲ್ಲಿ ನಮ್ಮ ಹೆಸರನ್ನು ಜೋಡಿಸುವುದನ್ನು ನೋಡಿ ಆಶ್ಚರ್ಯ ಪಡುತ್ತೇವೆ...." ಎಂದು ಸೈದ್ದಾಂತಿಕ ಜೋಡಣೆಯನ್ನು ತಳ್ಳಿಹಾಕಿದ್ದರು. == ಕಾದಂಬರಿಗಳು == ದಿ ಪಾಲ್ ದಿ ಔಟ್ ಸೈಡರ್ ದಿ ಪ್ಲೇಗ್ ಎ ಹ್ಯಾಪಿ ಡೆತ್ ದಿ ಫಸ್ಟ್ ಮ್ಯಾನ್ == ನಾಟಕಗಳು == ಕ್ಯಾಲಿಗುಲಾ == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == ಆಲ್ಬರ್ಟ್ ಕಾಮೂ ಓಪನ್ ಡೈರೆಕ್ಟರಿ ಪ್ರಾಜೆಕ್ಟ್ - Cité '